Sunday, March 17, 2024

Bangalore Rural Loksabha Constituency

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಏ.26ಕ್ಕೆ ಮತದಾನ

 * ರಾಮನಗರ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳು

* ಜೂ.4ರಂದು ರಾಮನಗರದಲ್ಲೇ ಮತ ಎಣಿಕೆ

 

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26, 2024ರಂದು ಚುನಾವಣೆ ನಡೆಯಲಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.

ನಗರದಲ್ಲಿರುವ ಜಿಲ್ಲಾ ಕಚೇರಿಗಳ ಸಂಕಿರ್ಣದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಲೋಕಸಭಾ ಚುನಾವಣೆಗಳು ಎರಡು ಹಂತದಲ್ಲಿ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಮೊದಲನೇ ಹಂತದಲ್ಲಿ ನಡೆಯಲಿದೆ ಎಂದರು.

ಚುನಾವಣಾ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಮಾರ್ಚ್16 ಶನಿವಾರ  ಸಂಜೆುಂದಲೇ ಆರಂಭವಾಗಿದೆ. ಮಾರ್ಚ್ 28ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ರಾಮನಗರ ಜಿಲ್ಲಾ ಕೇಂದ್ರದಲ್ಲಿರುವ ಡೀಸಿ ಕಚೇರಿಯಲ್ಲಿ ನಾಮಪತ್ರಗಳನ್ನು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ವೀಕರಿಸಲಾಗುವುದು. ಏಪ್ರಿಲ್ 3 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಏಪ್ರಿಲ್ 5 ನಾಮಪತ್ರಗಳ ಪರಿಶೀಲನೆ, ಏಪ್ರಿಲ್ 8 ನಾಮಪತ್ರಗಳನ್ನು ಹಿಂಪಡೆಯಲು ಕೊನೆ ದಿನ. ಏಪ್ರಿಲ್ 26ರಂದು ಮತದಾನ ನಡೆಯಲಿದೆ ಎಂದು ಅವರು ವಿವರಿಸಿದರು.

 

ಮತ ಎಣಿಕೆ ರಾಮನಗರದಲ್ಲೇ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ರಾಮನಗರದ ಅರ್ಚಕರಹಳ್ಳಿ ಬಳಿ ಇರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 4ರಂದು ನಡೆಯಲಿದೆ ಎಂದರು.

 

ತಪ್ಪದೆ ಮತ ಚಲಾಯಿಸಿ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ, ಕುಣಿಗಲ್, ಬೆಂಗಳೂರು ನಗರದ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಮತ್ತು ಆನೆಕಲ್ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಕ್ಷೇತ್ರ ವ್ಯಾಪ್ತಿಯ ಮತದಾರರು ತಪ್ಪದೆ ಏಪ್ರಿಲ್ 26ರಂದು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

11 ಮಂದಿ ಗಡಿಪಾರಿಗೆ ಶಿಪಾರಸ್ಸು - ಎಸ್ಪಿ

ಪತ್ರಿಕಾಗ್ಠೋಯಲ್ಲಿ ಹಾಜರಿದ್ದ ಎಸ್ಪಿ ಕಾರ್ತಿಕ್ ರೆಡ್ಡಿ ಮಾತನಾಡಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸೂಕ್ಷ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ವಿಚಾರದಲ್ಲಿ ಎಚ್ಚರಿಕೆ ವಹಿಸಲಾಗುವುದು. ರಾಮನಗರ ಜಿಲ್ಲೆಯಲ್ಲಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ 1193 ಮಂದಿ ಇದ್ದಾರೆ. ಪೈಕಿ 1105 ಮಂದಿಯ ವಿರುದ್ದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. 11 ಮಂದಿಯ ಗಡಿ ಪಾರಿಕೆ ಶಿಪಾರಸ್ಸು ಮಾಡಲಾಗಿದೆ ಎಂದು ವಿವರಿಸಿದರು. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು.

ಅಕ್ರಮ ಹಣ ಇತ್ಯಾದಿ ಸಾಗಾಟದ ಬಗ್ಗೆ ತೀವ್ರ ನಿಗಾ - ಸಿಇಒ ದಿಗ್ವಿಜಯ್ ಬೋಡ್ಕೆ

2024 ಲೋಕಸಭಾ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ 17 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಅಕ್ರಮವಾಗಿ ಹಣ ಸಾಗಾಟ, ಮಧ್ಯ ಮತ್ತು ವಸ್ತುಗಳ ಅಕ್ರಮ ಸಾಗಾಟದ ಮೇಲೆ ನಿಗಾವಹಿಸಲಾಗುವುದು. ಕಾನೂನು ಪ್ರಕಾರ ಕ್ರಮವಹಿಸಲಾಗುವುದು ಎಂದರು.

ಮತದಾನದ ಮಹತ್ವ ತಿಳಿಸಿ ಮತದಾನ ಮಾಡುವಂತೆ ಮತದಾರರನ್ನು ಪ್ರೋತ್ಸಾಹಿಸಲು, ಕಾರ್ಯಕ್ರಮಗಳು ನಡೆಯಲಿವೆ ಎಂದರು.








Monday, July 25, 2022

ಮದ್ದೂರು ಶಿವಪುರದ ಶ್ರೀ ರಾಘವೇಂದ್ರ ಭವನದಲ್ಲಿ ತಿನಿಸುಗಳ ರುಚಿ ಸೂಪರ್!

- ಬಿ.ವಿ.ಎಸ್‍

ನಮ್ಮದೊಂದು ಭಾನುವಾರದ ತಿಂಡಿಪೋತರ ತಂಡವಿದೆ. ಭಾನುವಾರ ಬೆಳಿಗ್ಗೆ ಹೋಟೆಲ್‍ಗಳಲ್ಲಿ ತಿಂಡಿ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದೇವೆ.  ರಾಮನಗರವಲ್ಲದೆ ಹತ್ತಿರದ ಊರುಗಳಿಗೆ ತಿಂಡಿಯ ರುಚಿ ಸವಿಯಲೆಂದೇ ಹೋಗುವುದುಂಟು.  ಹೋಟೆಲ್‍ಗಳ ಬಗ್ಗೆ ಸ್ನೇಹಿತರು, ಪರಿಚಯಸ್ಥರ ಬಳಿ ಅನ್ವೇಷಣೆ ನಡೆಸುವ ಗುಂಪಿನ ಸದಸ್ಯರು ಹೋಟೆಲ್‍ಗಳ ಶಿಪಾರಸ್ಸು ಮಾಡುತ್ತಾರೆ. ಅಂತಿಮವಾಗಿ ಒಂದು ಹೋಟೆಲ್‍ ನಿರ್ಧಾರವಾಗುತ್ತದೆ.  ಶನಿವಾರ ಸಂಜೆ ವೇಳೆಗೆ ಯಾವ ಹೋಟೆಲ್‍, ಯಾರು ಬರ್ತಾರೆ? ಎಂಬುದೆಲ್ಲ ನಿಗಧಿ ಮಾಡಿಕೊಳ್ಳಲು ವಾಟ್ಸಪ್‍ ಗುಂಪು ಮಾಡಿಕೊಂಡಿದ್ದೇವೆ.

ರಾಮನಗರದ ಅಡಿಗಾ ರೆಸ್ಟೋರೆಂಟ್‍ನಲ್ಲಿ ಬೈಟು ಕಾಫಿ ಹೀರುವ ಮೂಲಕ ನಿತ್ಯ ನಮ್ಮ ದಿನ ಆರಂಭವಾಗುತ್ತದೆ. ಭಾನುವಾರ ಇದಕ್ಕೆ ಹೊರತೇನಲ್ಲ. 2022ರ ಜುಲೈ 24ರ ಭಾನುವಾರ ಮದ್ದೂರು ಶಿವಪುರದ ಹಳೇ ಕೊಪ್ಪ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಭವನ – ಫಲಹಾರ ಮಂದಿರದಲ್ಲಿ ತಿಂಡಿ ತಿನ್ನುಲು ನಿರ್ಧಾರವಾಗಿತ್ತು. ಅಂತೆಯೇ ಅಂದು ಬೆಳಿಗ್ಗೆ ಅಡಿಗಾ ಹೋಟೆಲ್‍ನಲ್ಲಿ ಕಾಫಿ ಹೀರಿದ ನಂತರ ಸ್ನೇಹಿತ ನಾಗರಾಜ್‍ ಅವರ ಇನ್ನೋವಾ ಕಾರಿನಲ್ಲಿ ಶಿವಪುರದ ಶ್ರೀ ರಾಘವೇಂದ್ರ ಭವನಕ್ಕೆ ಹೋಗಿದ್ದೆವು.  ಹೋಟೆಲ್‍ ಮಾಲೀಕರ ಪ್ರಕಾರ 63 ವರ್ಷಗಳ ಹಿಂದೆ ಹೋಟೆಲ್‍ ಆರಂಭವಾಗಿ ನಾಗರೀಕರ ಪ್ರಶಂಸೆಗಳಿಸಿದೆ. ಮಂಡ್ಯ ಭಾಗದ ಖ್ಯಾತನಾಮರು, ರಾಜಕೀಯ ಪ್ರಮುಖರು ಆಗಾಗ್ಗೆ ಇಲ್ಲಿ ಫಲಹಾರ ಸವಿಯುತ್ತಾರೆ ಎಂದು ಅಲ್ಲಿನ ಗ್ರಾಹಕರು ತಿಳಿಸಿದರು.

ಪ್ರತಿದಿನ ಬೆಳಿಗ್ಗೆ ಇಡ್ಲಿ, ಉದ್ದಿನ ವಡೆ, ಮಸಾಲೆ ದೋಸೆ, ಸೆಟ್‍ ದೋಸೆ, ಖಾಲಿ ದೋಸೆ, ಬೆಣ್ಣೆ ದೋಸೆ, ಚೌ ಚೌ ಬಾತ್‍ ಸಿಗುತ್ತದೆ. ಪ್ರತಿ ದಿನ ಒಂದೊಂದು ರೀತಿಯ ರೈಸ್‍ ಬಾತ್‍ ಮಾಡುತ್ತಾರೆ. ಮಧ್ಯಾಹ್ನ  ಚಪಾತಿ, ಅನ್ನ ಸಾಂಬರ್‍, ಮೊಸರನ್ನ ತಯಾರಿಸುತ್ತಿದ್ದಾರೆ.

ಶಿವಪುರದಲ್ಲಿ ಹಳೆಯ ಹೋಟೆಲ್‍ ಇದಾಗಿದ್ದು,  ಒಳಾಂಗಣದಲ್ಲಿ ತನ್ನ ಸಾಂಪ್ರದಾಯಿಕತೆಯನ್ನು ಕಾಪಾಡಿಕೊಳ್ಳಲಾಗಿದೆ. ಇಲ್ಲಿ ಕುಳಿತು ತಿನ್ನಲು ಟೇಬಲ್‍, ಕುರ್ಚಿ, ನಿಂತು ಸವಿಯಲು ಟೇಬಲ್‍ ವ್ಯವಸ್ಥೆ ಇದೆ. ಬೆಳಿಗ್ಗೆ 6.30ರ ವೇಳೆಗೆಲ್ಲ ಕಾಫಿ, ಟೀ, ಇಡ್ಲಿ-ವಡೆ ಸಾಂಬರ್‍ ಸಿದ್ದ. ಕ್ರಮೇಣ ಉಳಿದೆಲ್ಲ ತಿಂಡಿಗಳು ಲಭ್ಯವಾಗುತ್ತದೆ.

ಮಸಾಲೆ ದೋಸೆ ಸೂಪರ್‍!

ಮಸಾಲೆ ದೋಸೆ ರುಚಿ ನಮ್ಮನ್ನು ಸೆಳೆಯಿತು. ಮಸಾಲೆ ದೋಸೆಗೆ ಹಚ್ಚಿದ್ದ ಕೆಂಪು ಚಟ್ನಿ ರುಚಿ ಹೆಚ್ಚಿಸಿತ್ತು. ತ್ರಿಕೋಣಾಕಾರದ ಗರಿ ಗರಿಯ ಮಸಾಲೆ ದೋಸೆಯ ಮಧ್ಯೆ ಆಲೂಗೆಡ್ಡೆ ಪಲ್ಯ ಧಾರಾಳವಾಗಿತ್ತು. ಬೆಣ್ಣೆಯೊಂದಿಗೆ ಮಸಾಲೆ ದೋಸೆ ಸವಿದರೆ ರುಚಿ ಡಬ್ಬಲ್‍!

ಸೆಟ್‍ ದೋಸೆ, ಬಿಸಿಬೇಳೆ ಬಾತ್‍ (ಭಾನುವಾರದ ರೈಸ್‍ ಬಾತ್‍ ವಿಶೇಷ), ಚೌ, ಚೌ ಬಾತ್‍, ಇಡ್ಲಿ – ವಡೆ – ಸಾಂಬರ್‍ ರುಚಿಕರವಾಗಿತ್ತು. (ಎಲ್ಲರೂ ಶೇರ್‍ ಮಾಡಿಕೊಂಡು ತಿಂದ್ದದ್ದು)  ಕಾಫಿ ಕೂಡ ಚೆನ್ನಾಗಿತ್ತು. 

ಮದ್ದೂರಿನ ಕಡೆ ನೀವು ಹೋದರೆ ಟ್ರೈ ಮಾಡಿ.  ಬೆಲೆಗಳು ವಿಪರೀತವೇನಿಲ್ಲ!

ತಿನ್ನೋಕೆ ಮಾತ್ರ ಸೀಮಿತವಲ್ಲ!

ಮದ್ದೂರಿಗೆ ಹೋಗಿದ್ದ ನಾವು ಅಲ್ಲಿನ ಉಗ್ರ ನರಸಿಂಹ ಸ್ವಾಮಿ ದೇವಾಲಯ, ವರದರಾಜ ಸ್ವಾಮಿ ದೇವಾಲಯ, ಹೊಳೆ ಆಂಜನೇಯಸ್ವಾಮಿ ದೇವಾಲಯ, ವರಪ್ರದ ಶ್ರೀನಿವಾಸ ಸ್ವಾಮಿ ದೇವಾಲಯಗಳಿಗೂ ತೆರಳಿ ಪ್ರಾರ್ಥಿಸಿದೆವು.

ಶ್ರೀ ರಾಘವೇಂದ್ರ ಭವನಕ್ಕೆ ಗೂಗಲ್ ಮ್ಯಾಪ್ ಲಿಂಕ್:https://maps.app.goo.gl/uUbGHfeB899Z3iSMA

..............

Monday, July 18, 2022

ರಾಮನಗರದಲ್ಲಿ ರುಚಿ ಸಂತೆ – ತಿಂಡಿ ಪ್ರಿಯರ ಹಬ್ಬ ಯಶಸ್ವಿ Food festival at Ramanagara

ರಾಮನಗರ: ಒಂದೇ ಸೂರಿನಡಿ ನೂರಾರು ಬಗೆಯ ಭಕ್ಷ್ಯಗಳು!  ನಾಲಗೆಯ ರುಚಿಯನ್ನು ತಣಿಸಲು ಯಾವ ತಿನಿಸು ಕೊಳ್ಳಬೇಕು ಎಂಬ ಗೊಂದಲ! ನಾಲಗೆಯ ರುಚಿಗೆ ಮಣಿದು ಬಗೆಬಗೆಯ ತಿನಿಸುಗಳನ್ನು ಟೇಸ್ಟ್‍ ಮಾಡಿದ ನಾಗರೀಕರು! ಇದು ಜಿಲ್ಲಾ ಕೇಂದ್ರ ರಾಮನಗರದ ಶ್ರೀ ಕನ್ನಿಕಾಮಹಲ್‍ನಲ್ಲಿ ನಡೆದ ರುಚಿ ಸಂತೆ ತಿಂಡಿ ಪ್ರಿಯರ ಹಬ್ಬದಲ್ಲಿ ಕಂಡು ಬಂದ ದೃಶ್ಯ!

ಆರ್ಯ ವೈಶ್ಯ ಸಮುದಾಯದ ಕುಟುಂಬಗಳೇ ಸ್ವತಃ ತಯಾರಿಸಿದ ಬಗೆಬಗೆಯ ಭಕ್ಷ್ಯಗಳನ್ನು ಸವಿದ ನೂರಾರು ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದರು. ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಮುಂತಾದ ಕುರುಕುಲು ತಿಂಡಿಯನ್ನು ಸದಾ ಬಯಸುವ ಈ ಸಮುದಾಯದ ಕುಟುಂಬಗಳು ಸಾಂಪ್ರದಾಯಿಕ ತಿಂಡಿಗಳು ಜೊತೆಗೆ ಸ್ಟಫಡ್ ಕ್ಯಾಪ್ಸಿಕಮ್, ಸ್ಟಫ್ಡ್ ಬ್ರಿಂಜಾಲ್, ವೆಜ್ ಮೋಮೋಸ್, ಪನ್ನೀರ್ ಮೋಮೋಸ್, ಆಲೂ ಚೀಸ್ ಪರಾಟ, ಚೀಸ್ ಮ್ಯಾಗಿ, ವೀಳ್ಯೆದೆಲೆ ಮಸಾಲ, ಚೀಸ್ ಕಾರ್ನ್ ಟೋಸ್ಟ್ ಮುಂತಾದ ಈಗ ಪ್ರಚಲಿತರದಲ್ಲಿರುವ ತಿಂಡಿಗಳನ್ನು ಸ್ವತಃ ತಯಾರಿಸಿ ಮೇಳದಲ್ಲಿ ಮಾರಾಟ ಮಾಡಿದ್ದು ವಿಶೇಷವಾಗಿತ್ತು.

ತಟ್ಟೆ ಇಡ್ಲಿ- ಈರುಳ್ಳಿ ಚಟ್ನಿ, ಒತ್ತು ಶ್ಯಾವಿಗಿಯಿಂದ ಮಾಡಿದ ಚಿತ್ರಾನ್ನ, ಪುಳಿಯೊಗರೆ ಗಮನ ಸೆಳೆಯಿತು. ಬೇಬಿ ಆಲೂ ಚಮಕ್, ಸ್ಟಫ್ಡ್ ಕ್ಯಾಪ್ಸಿಕಂ ಬಜ್ಜಿ ನಾಲಗೆಯ ರುಚಿಯನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾಯಿತು.

ಮನೆಯಲ್ಲೇ ತಯಾರಿಸಿದ್ದ ಬಟ್ಟರ್ ಸ್ಕಾಚ್, ಬ್ಲಾಕ್ ಫಾರೆಸ್ಟ್, ಮ್ಯಾಂಗೋ ಪೇಸ್ಟ್ರಿಗಳು, ಕಪ್ ಕೇಕ್‌ಗಳು  ಕೆಲ ಹೊತ್ತಿನಲ್ಲೇ ಪೂರ್ಣ ಮಾರಾಟವಾಯಿತು.

ಸಾಂಪ್ರದಾಯಿಕ ತಿಂಡಿಗಳಾದ ನಿಪ್ಪಟ್ಟು ಮಸಾಲ, ಮಿನಿ ಕೋಡುಬಳೆ ಮಸಾಲ, ಪಾನಿಪೂರಿ, ಚುರುಮುರಿ ಮುಂತಾದ ತಿನಿಸುಗಳಿಗೆ ಬೇಡಿಕೆ ಕಾಣಿಸಿತು. ಭಾನುವಾರವಾದ್ದರಿಂದ ಮಧ್ಯಾಹ್ನದ ಊಟದ ಬದಲಿಗೆ ನೂರಾರು ಕುಟುಂಬಗಳು ತಮ್ಮ ಪುಟಾಣಿಗಳ ಸಮೇತ ರುಚಿ ಸಂತೆಗೆ ಆಗಮಿಸಿ ತಮಗಿಷ್ಟವಾದ ಆಹಾರ ಸವಿದರು.

ರುಚಿಕರ ತಿಂಡಿಗಳ ಪರಿಚಯಕ್ಕಾಗಿ ಮೇಳ - ಹೇಮಾವತಿ

ರುಚಿ ಸಂತೆ ಆಯೋಜಿಸಿದ್ದ ಸಂಘಟನೆಗಳ ಪೈಕಿ ವಾಸವಿ ಮಹಿಳಾ ಸಂಘದ ಪ್ರಮುಖರಲ್ಲೊಬ್ಬರಾದ ಹೇಮಾವತಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಆರ್ಯ ವೈಶ್ಯ ಸಮುದಾಯದ ಕುಟುಂಬಗಳು ರುಚಿ, ಶುಚಿ ಅಡುಗೆಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ವಿಚಾರ ಸಮಾಜದಲ್ಲಿ ಪ್ರಚಲಿತದಲ್ಲಿದೆ. ತಿಂಡಿ, ತಿನಿಸುಗಳನ್ನು ಸಾರ್ವಜನಿಕರಿಗೆ ಉಣಬಡಿಸುವ ಅಪೇಕ್ಷೆಯಿಂದ ರುಚಿ ಸಂತೆಯನ್ನು ಆಯೋಜಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಆಹಾರ ಮೇಳವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 2020ರ ಜನವರಿಯಲ್ಲಿ ಅವರೇಬೇಳೆುಂದ ತಯಾರಿಸಿದ ಭಕ್ಷ್ಯಗಳ ಮೇಳಕ್ಕೆ ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಇದೀಗ ಕೋವಿಡ್ ಸಾಂಕ್ರಮಿಕ ಕ ರೋಗದ ಭೀತಿ ಕಡಿಮೆಯಾಗಿರುವ ಕಾರಣ ಈ ಮೇಳವನ್ನು ಆಯೋಜಿಸಲಾಗಿತ್ತು.  ಆಹಾರ ಮೇಳದ ಮೂಲಕ ಲಾಭ ಮಾಡುವ ಉದ್ದೇಶವಿಲ್ಲ. ನಾಗರೀಕರಿಗೆ ನಮ್ಮ ಸಮುದಾಯದ ರುಚಿಯನ್ನು ಪರಿಚುಸುವುದಷ್ಟೇ ಕಾಳಜಿ ಎಂದರು.

ರುಚಿಯಾಗಿತ್ತು ತಿನಿಸುಗಳು - ಮಹಾಲಕ್ಷ್ಮಿ, ನಗರಸಭಾ ಸದಸ್ಯೆ

ನಗರಸಭೆಯ 7ನೇ ವಾರ್ಡಿನ ನಗರಸಭಾ ಸದಸ್ಯೆ ಮಹಾಲಕ್ಷ್ಮಿ ರುಚಿ ಸಂತೆ ಆಹಾರ ಮೇಳವನ್ನು ಉದ್ಘಾಟಿಸಿದರು. ಹಲವಾರು ತಿನಿಸುಗಳನ್ನು ಸವಿದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಶುಚಿಗೆ ಆಧ್ಯತೆ ಕೊಟ್ಟು ಮಾಡಿದ ತಿನಿಸುಗಳು ರುಚಿಯಾಗಿದ್ದವು ಎಂದರು.

ನಾಗರೀಕರ ಪೈಕಿ ವಿಕಿತ, ಅನೂರಾಧ, ಲಾವಣ್ಯ ವಿ.ಕೆ.ವಿಜಯಪ್ರಭಾ ಮುಂತಾದವರು ಪ್ರತಿಕ್ರಿಯಿಸಿ ಮೇಳದಲ್ಲಿರುವ ತಿಂಡಿಗಳನ್ನು ಮನೆಯಲ್ಲಿಯೂ ಮಾಡುತ್ತೇವೆ. ಆದರೆ ಒಬ್ಬರದ್ದು ಒಂದೊಂದು ತಯಾರಿಕಾ ವಿಧಾನ (ರೆಸಿಪಿ) ಇರುತ್ತದೆ. ಸದಾ ಅಡುಗೆಯ ಮಾಡುವ ತಮಗೆ ರೆಸಿಪಿಗಳನ್ನು ತಿಳಿದುಕೊಳ್ಳುವ ತವಕ ಇರುತ್ತದೆ. ಹೀಗಾಗಿ ಈ ಮೇಳಕ್ಕೆ ಬಂದಿದ್ದಾಗಿ, ಮೇಳದಲ್ಲಿರುವ ಬಹುತೇಕ ತಿನಿಸುಗಳನ್ನು ರುಚಿ ಸ"ದಿದ್ದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ರುಚಿ ಸಂತೆ ಶೀರ್ಷಿಕೆ ಹೊತ್ತ ಆಹಾರ ಮೇಳದಲ್ಲಿ 10 ಸ್ಟಾಲ್‌ಗಳನ್ನು ಏರ್ಪಡಿಸಲಾಗಿತ್ತು.

ಆರ್ಯವೈಶ್ಯ ಸಭಾ, ವಾಸವಿ ವನಿತಾ ಸಂಘ, ವಾಸವಿ ವಿದ್ಯಾನಿಕೇತನ ಟ್ರಸ್ಟ್‌ಗಳ ಸಹಕಾರದಲ್ಲಿ ವಾಸವಿ ಯೂತ್ಸ್ ಫೋರಂ ಈ ಮೇಳವನ್ನು ಆಯೋಜಿಸಿತ್ತು.

..............

Wednesday, July 6, 2022

Alleged robbery, four arrested, gold jewelery, vehicles worth Rs 18 lakh seized

Ramanagaram: 6th July 2022:
Channaptna Rural police have arrested 4 accused who were wanted by 9 police stations including police stations in  Ramanagara District  and Bengaluru city. 
3 of the 4 accused are from Bengaluru City,. Mani a resident of Madanayakanahalli, Renuka Kumar from Girinagara Viji alias Vijay from Basavanagudi, Shiva alias Shivaprasad from Kukkurudoddi in Maddur Taluk are the accused.
The arrested are accused as chain snatchers. Police say they have recovered 315 grams of gold ornaments and 7 two wheelers, both worth Rupees 18 lakhs. The accused were wanted by Channapatna rural, Ramanagara Rural, Satanuru, Talaghattapura, Jnanabharathi, Chandralayout, Subrahmanyapura, Kengeri, and Girinagara police stations.

How were they caught?
On June 30, 2022 around 5am, all the four accused are said to be ambushing with weapons near Kengal in Channapatna Taluk. Immediately after getting this information from  reliable sources, the Channapatna Rural police raided and were successful in taking all the four into their custody. The accused have revealed chain snatching and thefts during the enquiry. 
Superindent of Police Ramanagara District Mr Santosh Babu in pressmeet praised CPI T.B.Shivakumar, PSI Liaquat Ulla, Basavaraju, Manohar, ASI M.Raju, Cops Venkatachaliah, Shivakumar, Mallikarjun, Chethan, Siddagangappa, Hanumantha Shetty all from Channapatna Rural Police Station  for arresting the notorious chain snatchers. DySP Mr Ramesh was present in the pressmeet.