ರಾಮನಗರ: ಒಂದೇ ಸೂರಿನಡಿ ನೂರಾರು ಬಗೆಯ ಭಕ್ಷ್ಯಗಳು! ನಾಲಗೆಯ ರುಚಿಯನ್ನು ತಣಿಸಲು ಯಾವ ತಿನಿಸು ಕೊಳ್ಳಬೇಕು ಎಂಬ ಗೊಂದಲ! ನಾಲಗೆಯ ರುಚಿಗೆ ಮಣಿದು ಬಗೆಬಗೆಯ ತಿನಿಸುಗಳನ್ನು ಟೇಸ್ಟ್ ಮಾಡಿದ ನಾಗರೀಕರು! ಇದು ಜಿಲ್ಲಾ ಕೇಂದ್ರ ರಾಮನಗರದ ಶ್ರೀ ಕನ್ನಿಕಾಮಹಲ್‍ನಲ್ಲಿ ನಡೆದ ರುಚಿ ಸಂತೆ – ತಿಂಡಿ ಪ್ರಿಯರ ಹಬ್ಬದಲ್ಲಿ ಕಂಡು ಬಂದ ದೃಶ್ಯ!
ಆರ್ಯ
ವೈಶ್ಯ ಸಮುದಾಯದ ಕುಟುಂಬಗಳೇ ಸ್ವತಃ ತಯಾರಿಸಿದ ಬಗೆಬಗೆಯ ಭಕ್ಷ್ಯಗಳನ್ನು ಸವಿದ ನೂರಾರು ನಾಗರೀಕರು
ಮೆಚ್ಚುಗೆ ವ್ಯಕ್ತಪಡಿಸಿದರು. ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಮುಂತಾದ ಕುರುಕುಲು ತಿಂಡಿಯನ್ನು
ಸದಾ ಬಯಸುವ ಈ ಸಮುದಾಯದ ಕುಟುಂಬಗಳು ಸಾಂಪ್ರದಾಯಿಕ ತಿಂಡಿಗಳು ಜೊತೆಗೆ ಸ್ಟಫಡ್ ಕ್ಯಾಪ್ಸಿಕಮ್, ಸ್ಟಫ್ಡ್
ಬ್ರಿಂಜಾಲ್, ವೆಜ್ ಮೋಮೋಸ್, ಪನ್ನೀರ್ ಮೋಮೋಸ್, ಆಲೂ ಚೀಸ್ ಪರಾಟ, ಚೀಸ್ ಮ್ಯಾಗಿ, ವೀಳ್ಯೆದೆಲೆ ಮಸಾಲ,
ಚೀಸ್ ಕಾರ್ನ್ ಟೋಸ್ಟ್ ಮುಂತಾದ ಈಗ ಪ್ರಚಲಿತರದಲ್ಲಿರುವ ತಿಂಡಿಗಳನ್ನು ಸ್ವತಃ ತಯಾರಿಸಿ ಮೇಳದಲ್ಲಿ
ಮಾರಾಟ ಮಾಡಿದ್ದು ವಿಶೇಷವಾಗಿತ್ತು.
ತಟ್ಟೆ
ಇಡ್ಲಿ- ಈರುಳ್ಳಿ ಚಟ್ನಿ, ಒತ್ತು ಶ್ಯಾವಿಗಿಯಿಂದ ಮಾಡಿದ ಚಿತ್ರಾನ್ನ, ಪುಳಿಯೊಗರೆ ಗಮನ ಸೆಳೆಯಿತು.
ಬೇಬಿ ಆಲೂ ಚಮಕ್, ಸ್ಟಫ್ಡ್ ಕ್ಯಾಪ್ಸಿಕಂ ಬಜ್ಜಿ ನಾಲಗೆಯ ರುಚಿಯನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾಯಿತು.
ಮನೆಯಲ್ಲೇ
ತಯಾರಿಸಿದ್ದ ಬಟ್ಟರ್ ಸ್ಕಾಚ್, ಬ್ಲಾಕ್ ಫಾರೆಸ್ಟ್, ಮ್ಯಾಂಗೋ ಪೇಸ್ಟ್ರಿಗಳು, ಕಪ್ ಕೇಕ್‌ಗಳು ಕೆಲ ಹೊತ್ತಿನಲ್ಲೇ ಪೂರ್ಣ ಮಾರಾಟವಾಯಿತು.
ಸಾಂಪ್ರದಾಯಿಕ ತಿಂಡಿಗಳಾದ ನಿಪ್ಪಟ್ಟು ಮಸಾಲ, ಮಿನಿ ಕೋಡುಬಳೆ ಮಸಾಲ, ಪಾನಿಪೂರಿ, ಚುರುಮುರಿ ಮುಂತಾದ ತಿನಿಸುಗಳಿಗೆ ಬೇಡಿಕೆ ಕಾಣಿಸಿತು. ಭಾನುವಾರವಾದ್ದರಿಂದ ಮಧ್ಯಾಹ್ನದ ಊಟದ ಬದಲಿಗೆ ನೂರಾರು ಕುಟುಂಬಗಳು ತಮ್ಮ ಪುಟಾಣಿಗಳ ಸಮೇತ ರುಚಿ ಸಂತೆಗೆ ಆಗಮಿಸಿ ತಮಗಿಷ್ಟವಾದ ಆಹಾರ ಸವಿದರು.
ರುಚಿಕರ
ತಿಂಡಿಗಳ ಪರಿಚಯಕ್ಕಾಗಿ ಮೇಳ - ಹೇಮಾವತಿ
ರುಚಿ ಸಂತೆ ಆಯೋಜಿಸಿದ್ದ ಸಂಘಟನೆಗಳ ಪೈಕಿ ವಾಸವಿ ಮಹಿಳಾ ಸಂಘದ ಪ್ರಮುಖರಲ್ಲೊಬ್ಬರಾದ ಹೇಮಾವತಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಆರ್ಯ ವೈಶ್ಯ ಸಮುದಾಯದ ಕುಟುಂಬಗಳು ರುಚಿ, ಶುಚಿ ಅಡುಗೆಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ವಿಚಾರ ಸಮಾಜದಲ್ಲಿ ಪ್ರಚಲಿತದಲ್ಲಿದೆ. ತಿಂಡಿ, ತಿನಿಸುಗಳನ್ನು ಸಾರ್ವಜನಿಕರಿಗೆ ಉಣಬಡಿಸುವ ಅಪೇಕ್ಷೆಯಿಂದ ರುಚಿ ಸಂತೆಯನ್ನು ಆಯೋಜಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಆಹಾರ ಮೇಳವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 2020ರ ಜನವರಿಯಲ್ಲಿ ಅವರೇಬೇಳೆುಂದ ತಯಾರಿಸಿದ ಭಕ್ಷ್ಯಗಳ ಮೇಳಕ್ಕೆ ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಇದೀಗ ಕೋವಿಡ್ ಸಾಂಕ್ರಮಿಕ ಕ ರೋಗದ ಭೀತಿ ಕಡಿಮೆಯಾಗಿರುವ ಕಾರಣ ಈ ಮೇಳವನ್ನು ಆಯೋಜಿಸಲಾಗಿತ್ತು. ಆಹಾರ ಮೇಳದ ಮೂಲಕ ಲಾಭ ಮಾಡುವ ಉದ್ದೇಶವಿಲ್ಲ. ನಾಗರೀಕರಿಗೆ ನಮ್ಮ ಸಮುದಾಯದ ರುಚಿಯನ್ನು ಪರಿಚುಸುವುದಷ್ಟೇ ಕಾಳಜಿ ಎಂದರು.
ರುಚಿಯಾಗಿತ್ತು
ತಿನಿಸುಗಳು - ಮಹಾಲಕ್ಷ್ಮಿ, ನಗರಸಭಾ ಸದಸ್ಯೆ
ನಗರಸಭೆಯ
7ನೇ ವಾರ್ಡಿನ ನಗರಸಭಾ ಸದಸ್ಯೆ ಮಹಾಲಕ್ಷ್ಮಿ ರುಚಿ ಸಂತೆ ಆಹಾರ ಮೇಳವನ್ನು ಉದ್ಘಾಟಿಸಿದರು. ಹಲವಾರು
ತಿನಿಸುಗಳನ್ನು ಸವಿದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಶುಚಿಗೆ ಆಧ್ಯತೆ ಕೊಟ್ಟು ಮಾಡಿದ ತಿನಿಸುಗಳು
ರುಚಿಯಾಗಿದ್ದವು ಎಂದರು.
ನಾಗರೀಕರ
ಪೈಕಿ ವಿಕಿತ, ಅನೂರಾಧ, ಲಾವಣ್ಯ ವಿ.ಕೆ.ವಿಜಯಪ್ರಭಾ ಮುಂತಾದವರು ಪ್ರತಿಕ್ರಿಯಿಸಿ ಮೇಳದಲ್ಲಿರುವ ತಿಂಡಿಗಳನ್ನು
ಮನೆಯಲ್ಲಿಯೂ ಮಾಡುತ್ತೇವೆ. ಆದರೆ ಒಬ್ಬರದ್ದು ಒಂದೊಂದು ತಯಾರಿಕಾ ವಿಧಾನ (ರೆಸಿಪಿ) ಇರುತ್ತದೆ. ಸದಾ
ಅಡುಗೆಯ ಮಾಡುವ ತಮಗೆ ರೆಸಿಪಿಗಳನ್ನು ತಿಳಿದುಕೊಳ್ಳುವ ತವಕ ಇರುತ್ತದೆ. ಹೀಗಾಗಿ ಈ ಮೇಳಕ್ಕೆ ಬಂದಿದ್ದಾಗಿ,
ಮೇಳದಲ್ಲಿರುವ ಬಹುತೇಕ ತಿನಿಸುಗಳನ್ನು ರುಚಿ ಸ"ದಿದ್ದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ರುಚಿ
ಸಂತೆ ಶೀರ್ಷಿಕೆ ಹೊತ್ತ ಆಹಾರ ಮೇಳದಲ್ಲಿ 10 ಸ್ಟಾಲ್‌ಗಳನ್ನು ಏರ್ಪಡಿಸಲಾಗಿತ್ತು.
ಆರ್ಯವೈಶ್ಯ
ಸಭಾ, ವಾಸವಿ ವನಿತಾ ಸಂಘ, ವಾಸವಿ ವಿದ್ಯಾನಿಕೇತನ ಟ್ರಸ್ಟ್‌ಗಳ ಸಹಕಾರದಲ್ಲಿ ವಾಸವಿ ಯೂತ್ಸ್ ಫೋರಂ
ಈ ಮೇಳವನ್ನು ಆಯೋಜಿಸಿತ್ತು.
..............
No comments:
Post a Comment